¡Sorpréndeme!

ತೀರ್ಪುಗಾರರನ್ನ ಮೂಕವಿಸ್ಮಿತಗೊಳಿಸಿದ 'ಲಕ್ಷ್ಮಿ' ಬದುಕಿನ ರೋಚಕ ಕಥೆ | Oneindia Kannada

2017-12-11 7 Dailymotion

ಜೀ-ಕನ್ನಡದಲ್ಲಿ ಆರಂಭವಾಗಿರುವ 'ಸರಿಗಮಪ' 14ನೇ ಆವೃತ್ತಿ ಮೊದಲ ವಾರವೇ ಗಮನ ಸೆಳೆದಿದೆ. ಪ್ರತಿಭಾನ್ವಿತ ಮಕ್ಕಳಿಗೆ ಅವಕಾಶ ನೀಡುವ ಮೂಲಕ ಜೀ-ವಾಹಿನಿ ಮತ್ತೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ. ಅದರಲ್ಲೂ, ಲಕ್ಷ್ಮಿ ರಾಮಪ್ಪ ಎಂಬ 14 ವರ್ಷದ ಬಾಲಕಿ ಈ ಆವೃತ್ತಿಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ. ಜನಪದ ಗೀತೆಯ ಮೂಲಕ ಆಡಿಷನ್ ಕೊಟ್ಟ ಲಕ್ಷ್ಮಿ, ತ್ರಿವಳಿ ಜಡ್ಜ್ ಗಳನ್ನ ಮೂಕವಿಸ್ಮಿತರನ್ನಾಗಿಸಿದರು. ಈಕೆಯ ಹಾಡು ಕೇಳಿ ಸ್ವತಃ ಹಂಸಲೇಖ ಅವರೇ ಹಾಡಿ ಕುಣಿದಿದ್ದಾರೆ.ಅಂದ್ಹಾಗೆ, ಲಕ್ಷ್ಮಿ ಸಣ್ಣ ಹಳ್ಳಿಯಿಂದ ಬಂದ ಬಾಲಕಿ. ಯಾವುದೇ ಸಂಗೀತ ಕಲಿತಿಲ್ಲ. ಆದ್ರೆ, ಹಾಡು ಮಾತ್ರ ಅದ್ಭುತವಾಗಿ ಹಾಡಬಲ್ಲರು. 'ಸರಿಗಮಪ' ವೇದಿಕೆಗೆ ಲಕ್ಷ್ಮಿ ಬರಲು ಒಂದು ರೋಚಕ ಕಥೆ ಇದೆ.9ನೇ ತರಗತಿ ಓದುತ್ತಿರುವ ಲಕ್ಷ್ಮಿ, ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಗೋಡಿಗೇರಿ. ಇವರ ಅಪ್ಪ ಮತ್ತು ಅಮ್ಮ ಕೂಲಿ ಕೆಲಸ ಮಾಡುತ್ತಾರೆ. ಲಕ್ಷ್ಮಿಗೊಬ್ಬರು ಅಣ್ಣ ಇದ್ದಾರೆ.ಅಂದ್ಹಾಗೆ, ಲಕ್ಷ್ಮಿ ಇದುವರೆಗೂ ಯಾವುದೇ ಸಂಗೀತ ಅಭ್ಯಾಸ ಮಾಡಿಲ್ಲ. ಯಾವುದೇ ತರಗತಿಗೂ ಹೋಗಿಲ್ಲ. ಮೊಬೈಲ್ ನಲ್ಲೇ ಹಾಡಿ ಕೇಳಿ, ಹಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.


'Sarigamapa Season 14' contestant lakshmi ramappa is one of the most attractive girl in this show Zee Kannada channel's popular show started from last Saturday. (December 9).